28 Mar 2009

ಶುಭಾಶಯಗಳು

ಪ್ರಿಯ ಓದುಗರೇ,,
ವಿರೋಧಿ ನಾಮ ಸಂವತ್ಸರದ belated ಹಾರ್ದಿಕ ಶುಭಾಶಯಗಳು.
ಇದೇನಿದು ಇದ್ದಕ್ಕೆ ಇದ್ದ ಹಾಗೆ, ಕನ್ನಡದಲ್ಲಿ blog ಕುಟ್ಟುತ್ತ ಇದ್ದೀನಿ ಅಂತ confusionಆ?
ಏನಿಲ್ಲ. ಸುಮ್ಮನೆ ಹಾಗೆ for a change ಅಷ್ಟೆ. ನಮ್ಮ್ ಭಾಷೆ, ಸಂಸ್ಕಾರಗಳನ್ನ ಬಿಡಕ್ಕಾಗತ್ತಾ?
ಆದ್ರೂ ಕೆಲವೊಮ್ಮೆ ಏನೋ ಬಿಟ್ಟುಹೋಗಿದೆ ಅನ್ನಿಸತ್ತೆ ಈ ದೊಡ್ಡ ದೊಡ್ಡ ಸಿಟಿಗಳಲ್ಲಿ.
for example, ನಮ್ಮ ಹಬ್ಬಗಳ ಆಚರಣೆಗಳನ್ನೇ ನೋಡಿ... ಆಗ ಒಂದು ಕಾಲ ಇತ್ತು. ಮನೆ ಮಂದಿ ಎಲ್ಲರೂ ಸೇರಿ ಹಬ್ಬಗಳನ್ನ ಆಚರಿಸೋ ಕಾಲ... ಆದ್ರೆ ಈಗ, phone ಮೂಲಕನೇ ಅಜ್ಜಿ ತಾತ, ಅತ್ತೆ ಮಾವ, ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ, ಅಣ್ಣ ಅತ್ತಿಗೆ, ಅಕ್ಕ ಭಾವ, and so on... ಎಲ್ಲರ ಆಶೀರ್ವಾದ ಸಿಕ್ಕು ಹೋಗತ್ತೆ. ಅವರ ಮುಖಗಳನ್ನ ನೋಡಿ ಅದೆಷ್ಟು ಕಾಲ ಆಗಿರತ್ತೆ ಅಂತ ಕೂಡ ಗೊತ್ತಿರಲ್ಲ ಕೆಲವೊಮ್ಮೆ.
ಆ ಕಾಲದಲ್ಲಿ, ಹಬ್ಬದ ಸಂಭ್ರಮ ಒಂದೆರಡು ದಿನ ಮುಂಚೇನೇ ಶುರು ಆಗಿರ್ತಿತ್ತು. city market, ಮಲ್ಲೇಶ್ವರಂ ಎಲ್ಲ ತುಂಬಿ ಹೋಗಿರೋದು family shoppingಗೆ. ಇವಾಗ ನೋಡಿದ್ರೆ, ಏನೂ difference ಕಾಣಲ್ಲ. ವರ್ಷವೆಲ್ಲಾ ಅಷ್ಟೇ ಜನ ಜಂಗುಳಿ ಇರತ್ತೆ. ಬೀದಿ ಬೀದಿಗೂ ರಾಶಿ ಮಾವಿನ ಸೊಪ್ಪು, ಬೇವಿನ ಸೊಪ್ಪು, ಹಾಕಿ ಮಾರಟಕ್ಕೆ ಕೂತಿರೋರು. ಇವಾಗ ಇಲ್ಲ ಅಂತಲ್ಲ, ಆದ್ರೆ, ಆವಾಗಿನ ಸಂಭ್ರಮ ಇವತ್ತು ಕಾಣೋಲ್ಲ.
ಈ IT ಬೂಮ್ ಯಾವಾಗ ಬಂದು ನಮ್ಮ ಊರಿಗೆ ತಟ್ಟಿತೋ ಅವಾಗ್ಲೇ change ಶುರು ಆಗಿಹೋಯ್ತು. ಇವತ್ತು ಜೀವನದ ರೀತಿ ಕೂಡ change ಆಗಿಹೋಗಿದೆ. But, ಕಾಲನ ಮಹಿಮೆ ಯಾರಿಗೆ ತಿಳಿಯತ್ತೆ ಹೇಳಿ?
ಹೊಸ ವರ್ಷದ ಬೇವು ಬೆಲ್ಲ ಬೆರೆತ ಜೀವನದಲ್ಲಿ, ಹೊಸತು ಹಳೆತುಗಳನ್ನ ಕೂಡ ಬೆರೆಸಿಕೊಂಡು ಜೀವನವೆಂಬ ಸುಂದರ ಪಯಣ ಮುಂದುವರೆಸೋಣ... ಸಂತಸದಲ್ಲಿ ಸಾಗೋಣ...
ಮತ್ತೊಮ್ಮೆ, ಹೊಸ ಸಂವತ್ತಿನ ಶುಭಾಶಯಗಳು.

No comments:

Post a Comment